
ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ನಡೆದ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯನ್ನು ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆಯನ್ನಾಗಿ ಘೋಷಿಸುವುದಾಗಿ ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಮುಂದಿನ ಬಜೆಟ್ನಲ್ಲಿ ಕಿತ್ತೂರು ಕೋಟೆ ಮರುಸೃಷ್ಟಿಗೆ 40 ಕೋಟಿ ರೂ. ಸೇರಿಸಲು ಆದೇಶ ಮಾಡುವುದಾಗಿ ಅವರು ಘೋಷಿಸಿದರು.
ಅಲ್ಲದೆ, ಈ ಭಾಗದ ವೃಷಭೇಂದ್ರ ಏತನೀರಾವರಿ ಯೋಜನೆಗೆ 500 ಕೋಟಿ ರೂ. ಮೀಸಲಿಡುವುದಾಗಿ ಅವರು ಸಮಾರಂಭದಲ್ಲಿ ತಿಳಿಸಿದರು.