
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮೂವರು ಯುವಕರು ಮೈಕ್ರೋ ಸೆಲ್ ತಂತ್ರಜ್ಞಾನ ಬಳಸಿ ದೊಡ್ಡ ಟವರ್‌ಗಳ ಹಂಗಿಲ್ಲದೆ ದಟ್ಟ ಅರಣ್ಯದಲ್ಲೂ ಬಿಎಸ್‌ಎನ್‌ಎಲ್ 4G ನೆಟ್‌ವರ್ಕ್ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ನೆಟ್‌ವರ್ಕ್ ಇಲ್ಲದೆ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಅನುಭವಿಸಿದ ಕಷ್ಟದಿಂದ ಪ್ರೇರಿತರಾಗಿ ಅಭಯ್, ಸುದರ್ಶನ್ ಮತ್ತು ಸಮರ್ಥ್ 'ನೆಕ್ಸಸ್ ಸ್ಪೆರಿಕಲ್ ಟೆಕ್ನಾಲಜೀಸ್' ಸಂಸ್ಥೆ ಹುಟ್ಟುಹಾಕಿದರು.
ಬೆಂಗಳೂರಿನ ಲೇಖಾ ವೈರ್‌ಲೆಸ್ ಸೊಲ್ಯೂಷನ್ಸ್ ತಾಂತ್ರಿಕ ಬೆಂಬಲದೊಂದಿಗೆ ಯಲ್ಲಾಪುರ ತಾಲೂಕಿನ ಆನಗೋಡ ಅರಣ್ಯ ಭಾಗದಲ್ಲಿ ನಡೆಸಿದ ಪ್ರಾಯೋಗಿಕ ಪರೀಕ್ಷೆ ನೂರಕ್ಕೆ ನೂರರಷ್ಟು ಯಶಸ್ವಿಯಾಗಿದೆ.