
'12th ಫೇಲ್' ಸಿನಿಮಾ ಖ್ಯಾತಿಯ ನಟಿ ಮೇಧಾ ಶಂಕರ್ ಹಾಗೂ ಸ್ಟ್ಯಾಂಡಪ್ ಕಾಮಿಡಿಯನ್ ಸಮಯ್ ರೈನಾ ಪ್ರೀತಿಸುತ್ತಿದ್ದಾರೆ ಮತ್ತು ಡಿಸೆಂಬರ್ನಲ್ಲಿ ಮದುವೆಯಾಗಲಿದ್ದಾರೆ ಎಂಬ ವದಳಿಗಳು ಹರಿದಾಡಿದ್ದವು.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಈ ಮದುವೆ ವದಳಿಗೆ ಇನ್ಸ್ಟಾಗ್ರಾಮ್ ಮೂಲಕ ಪ್ರತಿಕ್ರಿಯಿಸಿರುವ ಸಮಯ್ ರೈನಾ, ಡಿಸೆಂಬರ್ನಲ್ಲಿ ಇಂಡಿಯಾ ಟೂರ್ ಇರುವುದರಿಂದ ಮದುರೆಯನ್ನು ಮುಂದೂಡಬೇಕಾಗುತ್ತದೆ ಎಂದು ತಮಾಷೆ ಮಾಡಿದ್ದಾರೆ.
ಈ ವದಳಿಗಳ ಬಗ್ಗೆ ನಟಿ ಮೇಧಾ ಶಂಕರ್ ಕೂಡ ನಗುವಿನ ಇಮೋಜಿಗಳು ಹಾಗೂ ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.