Indian Politics
ಕರ್ನಾಟಕದಲ್ಲಿ ವಿಶೇಷ ಕಾರ್ಯಾಚರಣೆ: 800 ಬಾಲ ಕಾರ್ಮಿಕರ ರಕ್ಷಣೆ

ಕರ್ನಾಟಕದಲ್ಲಿ ವಿಶೇಷ ಕಾರ್ಯಾಚರಣೆ: 800 ಬಾಲ ಕಾರ್ಮಿಕರ ರಕ್ಷಣೆ

tv9kannada2h
THE BRIEF
1

ಕರ್ನಾಟಕದಾದ್ಯಂತ 598 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಪೊಲೀಸರು ಬರೋಬ್ಬರಿ 800 ಮಂದಿ ಬಾಲ ಕಾರ್ಮಿಕರನ್ನು ರಕ್ಷಿಸಿದ್ದಾರೆ.

2

ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡಿರುವ ಖಚಿತ ಮಾಹಿತಿಯ ಆಧಾರದ ಮೇಲೆ 16,951 ಸ್ಥಳಗಳಲ್ಲಿ ಪೊಲೀಸರು ಶೋಧ ನಡೆಸಿದ್ದು, ಬೆಂಗಳೂರು ಒಂದರಲ್ಲೇ 503 ಮಕ್ಕಳನ್ನು ರಕ್ಷಿಸಲಾಗಿದೆ.

3

ರಕ್ಷಿಸಲಾದ ಮಕ್ಕಳನ್ನು ಮಂಗಳವಾರದಂದು ಚೈಲ್ಡ್ ವೆಲ್ಫೇರ್ ಕಮಿಟಿ (CWC) ಮುಂದೆ ಹಾಜರುಪಡಿಸಲಾಗುತ್ತಿದ್ದು, ಮಕ್ಕಳನ್ನು ಮಾರಾಟ ಮಾಡಿ ಕೆಲಸಕ್ಕೆ ಇಟ್ಟಿರುವುದು ಕಂಡುಬಂದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ.