
ಜಪಾನ್ನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ 114 ಪದಕಗಳನ್ನು ಗೆದ್ದ ಭಾರತದ ಪ್ಯಾರಾ ಕ್ರೀಡಾಪಟುಗಳನ್ನು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಅಭಿನಂದಿಸಿದರು.
ಈ ಬಾರಿಯ ಪಂದ್ಯಾವಳಿಯಲ್ಲಿ ಭಾರತವು 30 ಚಿನ್ನ, 35 ಬೆಳ್ಳಿ ಮತ್ತು 49 ಕಂಚಿನ ಪದಕಗಳನ್ನು ಗೆದ್ದಿದ್ದು, ಜೊತೆಗೆ 5 ವಿಶ್ವ ದಾಖಲೆ ಹಾಗೂ 9 ಏಷ್ಯನ್ ದಾಖಲೆಗಳನ್ನು ಸ್ಥಾಪಿಸಿದೆ.
ಕ್ರೀಡಾ ಮೂಲಸೌಕರ್ಯಗಳನ್ನು ಬಲಪಡಿಸುವ ಮೂಲಕ ಭಾರತವು ಜಾಗತಿಕ ಕ್ರೀಡಾ ಉತ್ಪಾದನಾ ಕೇಂದ್ರವಾಗಬೇಕು ಎಂದು ಕರೆ ನೀಡಿದ ಮೋದಿ, ಕ್ರೀಡಾಪಟುಗಳ ಕಠಿಣ ಶ್ರಮವನ್ನು ಶ್ಲಾಘಿಸಿದರು.