
ಬಿಗ್ ಬಾಸ್ ಕನ್ನಡ ಸೀಸನ್ 13 ಶೋನಲ್ಲಿ ಈ ವಾರದ ನಾಮಿನೇಷನ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಿರಣ್ ಶಾಸ್ತ್ರಿ, ಧನುಷ್, ಲಿಖಿತ್, ಮಂಜು, ಯಶಸ್ ಹಾಗೂ ಸಂಗೀತಾ ಭಟ್ ನಾಮಿನೇಟ್ ಆಗಿದ್ದಾರೆ.
ಕಳೆದ ವಾರ ಕ್ಯಾಪ್ಟನ್ ಆಗಿದ್ದ ಸಂಗೀತಾ ಭಟ್ ಅವರು ಪಕ್ಷಪಾತ ಮಾಡಿದರು ಎಂಬ ಆರೋಪದ ಮೇಲೆ ಈ ವಾರ ನಾಮಿನೇಷನ್ ಪಟ್ಟಿಯಲ್ಲಿದ್ದಾರೆ.
ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿಯೊಂದಿಗೆ ದೊಡ್ಮನೆಯ ಆಟದಲ್ಲಿ ಹೊಸ ತಿರುವು ನಿರೀಕ್ಷಿಸಲಾಗುತ್ತಿದ್ದು, ವಾರಾಂತ್ಯದಲ್ಲಿ ಯಾರಿಗೆ ಗೇಟ್ ಪಾಸ್ ಸಿಗಲಿದೆ ಎಂಬ ಕೌತುಕ ಮೂಡಿದೆ.