
ಬೆಳಗಾವಿಯ ಶಿವಂ ಅಸೋಸಿಯೇಟ್ಸ್ನಿಂದ ನಡೆದ 2,459 ಕೋಟಿ ರೂ. ಹಗರಣದ ಬಗ್ಗೆ ಮಂಗಳೂರು ಉಪ ವಿಭಾಗದ ಇಡಿ ಅಧಿಕಾರಿಗಳು ದಕ್ಷಿಣ ಕನ್ನಡ ಮೂರನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ಗೆ ವರದಿ ಸಲ್ಲಿಸಿದ್ದಾರೆ.
ಸಂಸ್ಥೆಯು 35 ಸಾವಿರ ಗ್ರಾಹಕರಿಂದ ಹಣ ಸಂಗ್ರಹಿಸಿ ತಿಂಗಳಿಗೆ ಶೇ. 3 ಬಡ್ಡಿ ಹಾಗೂ ಕಮಿಷನ್ ಆಸೆ ತೋರಿಸಿದ್ದು, ಹೈರಿಸ್ಕ್ ಟ್ರೇಡಿಂಗ್ನಲ್ಲಿ ನಷ್ಟವಾಗಿ 185.95 ಕೋಟಿ ರೂ. ಕಳೆದುಕೊಂಡಿದೆ.
ಪ್ರಕರಣದ ಪ್ರಮುಖ ಆರೋಪಿ ಶಿವಾನಂದ ನೀಲಣ್ಣನವರ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಅಕ್ರಮ ಹಣದಿಂದ ರಿಯಲ್ ಎಸ್ಟೇಟ್ ಖರೀದಿ ಹಾಗೂ ಕನ್ನಡ ಚಲನಚಿತ್ರ ನಿರ್ಮಾಣಕ್ಕೂ ಬಂಡವಾಳ ಹಾಕಲಾಗಿದೆ.