
ಅಯೋಧ್ಯೆ ರಾಮಮಂದಿರದ ದೇಣಿಗೆ ಕಳವು ಆರೋಪವನ್ನು ಖಂಡಿಸಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಹೊರಗೆ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಪುರ್ನಿಯಾ ಸಂಸದ ಪಪ್ಪು ಯಾದವ್ ಸನ್ಯಾಸಿಯ ವೇಷದಲ್ಲಿ ಕಾಣಿಕೆ ಹುಂಡಿ ಹಿಡಿದು ಪ್ರತಿಭಟನೆಯ ನೇತೃತ್ವ ವಹಿಸಿದ್ದು, ರಾಹುಲ್ ಗಾಂಧಿ ಕೂಡ ಸಾಂಕೇತಿಕವಾಗಿ ಕಾಣಿಕೆ ಹಾಕಿದರು.
ಜುಲೈ 20ರಂದು ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ ಮತ್ತು ಅಮಿತ್ ಶಾ ಅವರ ಗೈರುಹಾಜರಿಯನ್ನು ಪ್ರಶ್ನಿಸಿ ಸತತ ಎರಡನೇ ದಿನವೂ ಪ್ರತಿಭಟನೆ ಮುಂದುವರಿಯಿತು.