
ಬೆಂಗಳೂರಿನ ವೈಟ್‌ಫೀಲ್ಡ್ ಪೊಲೀಸರು ಸಿವಿಲ್ ವ್ಯಾಜ್ಯವೊಂದರಲ್ಲಿ ವ್ಯಕ್ತಿಯೊಬ್ಬರನ್ನು ಅಕ್ರಮವಾಗಿ ಬಂಧಿಸಿದ್ದಕ್ಕಾಗಿ ಹೈಕೋರ್ಟ್ ₹3 ಲಕ್ಷ ದಂಡ ವಿಧಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು, ದಂಡದ ಮೊತ್ತವನ್ನು ತನಿಖಾಧಿಕಾರಿ, ವೈಟ್‌ಫೀಲ್ಡ್ ಡಿಸಿಪಿ ಮತ್ತು ಎಸಿಪಿಯವರು ತಮ್ಮ ಸ್ವಂತ ಸಂಬಳದಿಂದ ಪಾವತಿಸಬೇಕೆಂದು ಕಟ್ಟುನಿಟ್ಟಾಗಿ ತಾಕೀತು ಮಾಡಿದೆ.
ಸಿವಿಲ್ ಪ್ರಕರಣ ನ್ಯಾಯಾಲಯದಲ್ಲಿರುವಾಗ ಪೊಲೀಸರು ಮಧ್ಯಪ್ರವೇಶಿಸಿ ನೋಟಿಸ್ ನೀಡಿದ ದಿನವೇ ಬಂಧನ ಮಾಡಿದ್ದನ್ನು ಖಂಡಿಸಿದ ನ್ಯಾಯಾಲಯ, ಇನ್ನು ಮುಂದೆ ಇಂತಹ ಪೊಲೀಸ್ ರಾಜ್ ನಡೆಯುವುದಿಲ್ಲವೆಂದು ಎಚ್ಚರಿಸಿದೆ.