International
ಪಿಒಕೆ ಕುರಿತ ನ್ಯೂಯಾರ್ಕ್ ಟೈಮ್ಸ್ ವರದಿಗೆ ಭಾರತದ ಆಕ್ಷೇಪ

ಪಿಒಕೆ ಕುರಿತ ನ್ಯೂಯಾರ್ಕ್ ಟೈಮ್ಸ್ ವರದಿಗೆ ಭಾರತದ ಆಕ್ಷೇಪ

vijaykarnataka1h
THE BRIEF
1

ಪಾಕ್ ಆಕ್ರಮಿತ ಕಾಶ್ಮೀರವನ್ನು 'ಪಾಕಿಸ್ತಾನಿ ಕಾಶ್ಮೀರ' ಎಂದು ತಪ್ಪಾಗಿ ಬಿಂಬಿಸಿದ ನ್ಯೂಯಾರ್ಕ್ ಟೈಮ್ಸ್ ವರದಿಯನ್ನು ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿ ಖಂಡಿಸಿದೆ.

2

ಜಮ್ಮು-ಕಾಶ್ಮೀರ ಮತ್ತು ಲಡಾಖ್ ಭಾರತದ ಅವಿಭಾಜ್ಯ ಅಂಗಗಳೆಂದು ಪುನರುಚ್ಚರಿಸಿರುವ ರಾಯಭಾರ ಕಚೇರಿ, ಪಾಕಿಸ್ತಾನ ಈ ಪ್ರದೇಶಗಳನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಎಂದು ಸ್ಪಷ್ಟಪಡಿಸಿದೆ.

3

ಪಿಒಕೆಯಲ್ಲಿನ ಜನಾಕ್ರೋಶ ಮತ್ತು ಪಾಕ್ ಸೇನೆಯ ದಮನಕಾರಿ ನೀತಿಯಿಂದಾಗಿ ನಡೆದ ಪ್ರತಿಭಟನೆಗಳಲ್ಲಿ 30ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.