
ಹರಿಯಾಣದ ಫರೀದಾಬಾದ್‌ನಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ 42 ವರ್ಷದ ಶ್ಯಾಮವೀರ್ ಎಂಬಾತನನ್ನು ಆತನ ಪತ್ನಿ ಕೇಶವ್ ಮತ್ತು ಪ್ರಿಯಕರ ಕಾಮತ್ ಸೇರಿ ಕೊಲೆ ಮಾಡಿದ್ದಾರೆ.
ಆಗಸ್ಟ್ 16ರಂದು ಮದ್ಯ ಕುಡಿಸಿ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ ಆರೋಪಿಗಳು, ಮೃತದೇಹವನ್ನು ಮನೆ ಸಮೀಪದ ಗುಂಡಿಯಲ್ಲಿ ಹೂತುಹಾಕಿ ಸಾಕ್ಷ್ಯ ನಾಶಪಡಿಸಿದ್ದರು.
ಆಗಸ್ಟ್ 24ರಂದು ಸ್ಥಳೀಯರು ನೀಡಿದ ದೂರಿನ ಮೇರೆಗೆ ಡಿಎಲ್‌ಎಫ್ ಕ್ರೈಂ ಬ್ರಾಂಚ್ ಪೊಲೀಸರು ತನಿಖೆ ನಡೆಸಿ, 24 ಗಂಟೆಗಳ ಒಳಗಾಗಿ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.