
ಮಂಡ್ಯ ವಿಶ್ವವಿದ್ಯಾಲಯವು ತನ್ನ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 4 ಅತಿಥಿ ಉಪನ್ಯಾಸಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆಫ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಕಾಮರ್ಸ್, ಎಂ.ಎಸ್.ಡಬ್ಲ್ಯೂ, ಶುಗರ್ ಟೆಕ್ನಾಲಜಿ ಮತ್ತು ಪಾಲಿಮರ್ ಸೈನ್ಸ್ ವಿಭಾಗಗಳಲ್ಲಿ ತಲಾ ಒಂದೊಂದು ಹುದ್ದೆ ಇದ್ದು, ಸ್ನಾತಕೋತ್ತರ ಪದವಿಯೊಂದಿಗೆ ಎನ್ಇಟಿ, ಎಸ್ಎಲ್ಇಟಿ, ಕೆಎಸ್ಇಟಿ ಅಥವಾ ಪಿಎಚ್ಡಿ ಪಡೆದಿರಬೇಕು.
ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅಕ್ಟೋಬರ್ 27ರೊಳಗೆ ಕುಲಸಚಿವರಿಗೆ ತಲುಪಿಸುವಂತೆ ಸೂಚಿಸಲಾಗಿದೆ.