
ದೇಶದ ರೈತರಿಗೆ ಎಲ್ಲಾ ಕೃಷಿ ಸೇವೆಗಳು ಒಂದೇ ವೇದಿಕೆಯಲ್ಲಿ ಸಿಗುವಂತೆ ಮಾಡಲು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ನವದೆಹಲಿಯಲ್ಲಿ ಕೃಷಿ ಕಲ್ಯಾಣ ಪೋರ್ಟಲ್ ಅನ್ನು ಬಿಡುಗಡೆಗೊಳಿಸಿದರು.
ಈ ಪೋರ್ಟಲ್ ಮೂಲಕ ರೈತರು ಪಿಎಂ-ಕಿಸಾನ್, ಅಗ್ರಿಸ್ಟ್ಯಾಕ್ ಮತ್ತು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಸೇರಿ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಮೊಬೈಲ್ ಮೂಲಕವೇ ನೇರವಾಗಿ ಪಡೆಯಬಹುದಾಗಿದೆ.
ಈ ಡಿಜಿಟಲ್ ವೇದಿಕೆಯು ರೈತರಿಗೆ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ ಸಮಯ ಉಳಿಸುವುದಲ್ಲದೆ, ಮಧ್ಯವರ್ತಿಗಳ ಪಾತ್ರವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.