
ಕಾವೇರಿ ನೀರು ನಿರ್ವಹಣಾ ಸಮಿತಿಯು ತಮಿಳುನಾಡಿಗೆ 15 ದಿನಗಳ ಕಾಲ ದಿನಕ್ಕೆ 9,000 ಕ್ಯೂಸೆಕ್ನಂತೆ 12 TMC ನೀರು ಹರಿಸಲು ಆದೇಶಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕೆಆರ್ಎಸ್ ಜಲಾಶಯದಲ್ಲಿ 49.452 TMC ಸಾಮರ್ಥ್ಯಕ್ಕೆ ಪ್ರಸ್ತುತ 29.959 TMC ನೀರು ಸಂಗ್ರಹವಿದ್ದು, ಭವಿಷ್ಯದಲ್ಲಿ ಕುಡಿಯುವ ನೀರಿನ ಅಭಾವದ ಆತಂಕ ಎದುರಾಗಿದೆ.
ರಾಜ್ಯದ ಪ್ರಮುಖ ಜಲಾಶಯಗಳಾದ ಹೇಮಾವತಿಯಲ್ಲಿ 30.551 TMC, ಭದ್ರಾದಲ್ಲಿ 59.420 TMC ಮತ್ತು ಲಿಂಗನಮಕ್ಕಿಯಲ್ಲಿ ಶೇ 58.16ರಷ್ಟು ನೀರು ಸಂಗ್ರಹವಿದೆ.