
ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂಸವಾರಿ ಯಾವುದೇ ಅಹಿತಕರ ಘಟನೆಗಳು ನಡೆಯದೆ ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ಪ್ರಶಾಂತ ಆನೆ ಅಂಬಾರಿ ಹೊತ್ತು ಸಾಗಿದ್ದಾನೆ.
ಮೊದಲ ಬಾರಿಗೆ 750 ಕೆಜಿ ತೂಕದ ಅಂಬಾರಿ ಹೊತ್ತ ಕ್ಯಾಪ್ಟನ್ ಪ್ರಶಾಂತ ಸಂಜೆ 4.31ಕ್ಕೆ ಅರಮನೆಯಿಂದ ಹೊರಟು 2 ಗಂಟೆಯಲ್ಲಿ 5 ಕಿ.ಮೀ. ದೂರ ಕ್ರಮಿಸಿ ಬನ್ನಿಮಂಟಪ ತಲುಪಿದ್ದಾನೆ.
ಇದೇ ಮೊದಲ ಬಾರಿಗೆ ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ಮೆರೆಸಿದ ಪ್ರಶಾಂತ ಆನೆಗೆ, 18 ವರ್ಷಗಳ ಬಳಿಕ ಅಂಬಾರಿ ಹೊರುವ ಪುಣ್ಯ ಸಿಕ್ಕಿದೆ.