
ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಭಾರತ ರತ್ನ ಎಂ.ಎಸ್. ಸುಬ್ಬುಲಕ್ಷ್ಮಿ ಅವರ 110ನೇ ಜಯಂತಿಯ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾಗವಹಿಸಿದ್ದರು.
ಸುಬ್ಬುಲಕ್ಷ್ಮಿ ಅವರ ಮರಿಮೊಮ್ಮಕ್ಕಳಾದ ಎಸ್. ಐಶ್ವರ್ಯ ಮತ್ತು ಎಸ್. ಸೌಂದರ್ಯ ಅವರ ಸಂಗೀತ ಕಚೇರಿಯನ್ನು ಆಲಿಸುತ್ತಿದ್ದ ವೇಳೆ ಸಚಿವರು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.
ಗಾಯನ ಬಳಿಕ ತಾವೇ ಖುದ್ದಾಗಿ ತೆರಳಿ ಆ ಇಬ್ಬರು ಯುವ ಗಾಯಕಿಯರನ್ನು ಸಚಿವೆ ಅಭಿನಂದಿಸಿ, ಸುಬ್ಬುಲಕ್ಷ್ಮಿ ಅವರ ಸಂಗೀತ ಸೇವೆಯನ್ನು ಸ್ಮರಿಸಿದರು.