
ಪಶ್ಚಿಮ ಬಂಗಾಳದ ನವರಾತ್ರಿ ಉತ್ಸವದಲ್ಲಿ ಕೂರಿಸುವ ದುರ್ಗಾ ಮಾತೆಯ ಮೂರ್ತಿಗೆ ಹೌರಾ ಜಿಲ್ಲೆಯ ಮುಸ್ಲಿಂ ಕುಶಲಕರ್ಮಿಗಳು ತಯಾರಿಸುವ ಕೃತಕ ಕೂದಲು ಬಳಸಲಾಗುತ್ತದೆ.
ಹೌರಾ ಜಿಲ್ಲೆಯ ಪರ್ಬತಿಪುರ ಗ್ರಾಮದ ಮುಸ್ಲಿಂ ಕುಟುಂಬಗಳು ತಲೆಮಾರುಗಳಿಂದ ಸೆಣಬಿನಿಂದ ಈ ವಿಶೇಷ ಕೂದಲನ್ನು ತಯಾರಿಸುವ ಕರಕುಶಲ ಕಲೆಯನ್ನು ಮುಂದುವರೆಸಿಕೊಂಡು ಬಂದಿವೆ.
ವರ್ಷದ ಬಹುಪಾಲು ಕೃಷಿಯಲ್ಲಿ ತೊಡಗುವ ಈ ಕುಶಲಕರ್ಮಿಗಳು ಹಬ್ಬದ ಸೀಸನ್ನಲ್ಲಿ ಈ ಕಲೆಗೆ ಮರಳಿ ಮೂರ್ತಿಗಳಿಗೆ ಜೀವ ತುಂಬುತ್ತಾರೆ.