
ವಿವಿಧ ಭಾಷೆಯ ಜನರನ್ನು ಬೆಸೆಯುವಲ್ಲಿ ಹಿಂದಿ ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನವಿ ಮುಂಬೈನಲ್ಲಿ ತಿಳಿಸಿದರು.
ನವಿ ಮುಂಬೈನಲ್ಲಿ ನಡೆದ ಎರಡು ದಿನಗಳ ಹಿಂದಿ ದಿವಸ್ 2026 ಹಾಗೂ ಆರನೇ ಅಖಿಲ ಭಾರತೀಯ ರಾಜಭಾಷಾ ಸಮ್ಮೇಳನವನ್ನು ಅವರು ಉದ್ಘಾಟಿಸಿದರು.
ಅಧಿಕೃತ ಭಾಷಾ ಕ್ಷೇತ್ರದಲ್ಲಿ ಅತ್ಯುತ್ತಮ ಕೊಡುಗೆ ನೀಡಿದ ಹನ್ನೊಂದು ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ಈ ವೇಳೆ ಗೌರವಿಸಲಾಯಿತು.