
ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಾನುವಾರ ಉತ್ತರ 24 ಪರಗಣ ಜಿಲ್ಲೆಗೆ ಭೇಟಿ ನೀಡುತ್ತಿದ್ದಾಗ ಅವರ ಕಾರಿನ ಮೇಲೆ ಕಲ್ಲು ಮತ್ತು ಕೆಸರು ತೂರಾಟ ನಡೆದಿದೆ.
ಬಿಜ್ಪುರ್ ಎಂಬಲ್ಲಿ ಪ್ರತಿಭಟನಕಾರರು ಕಾರನ್ನು ಸುತ್ತುವರಿದು 'ಕಳ್ಳಿ' ಎಂದು ಘೋಷಣೆ ಕೂಗಿದ್ದು, ಮಮತಾ ಅವರ ಕಾರಿನ ಮೇಲೆ ಬೂಟುಗಳನ್ನು ಸಹ ಎಸೆಯಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಟಿಎಂಸಿ ಕಾರ್ಯಕರ್ತನೊಬ್ಬ ಹಾಲಿಶಹರ್ ಪೊಲೀಸರ ವಶದಲ್ಲಿದ್ದಾಗ ಮೃತಪಟ್ಟಿದ್ದು, ಆತನ ಅಂತಿಮ ದರ್ಶನಕ್ಕೆ ತೆರಳುತ್ತಿದ್ದಾಗ ಭದ್ರತಾ ಲೋಪದಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಮಮತಾ ಪ್ರತಿಕ್ರಿಯಿಸಿದ್ದಾರೆ.