
ಭಾರತದಲ್ಲಿ ಸೌರಶಕ್ತಿ ಉಪಕರಣಗಳ ಉತ್ಪಾದನೆ ಗಣನೀಯವಾಗಿ ಹೆಚ್ಚುತ್ತಿರುವುದು ಚೀನಾದ ಅಗ್ರಗಣ್ಯ ಸೌರಶಕ್ತಿ ಕಂಪನಿಗಳಿಗೆ ಬಿಲಿಯನ್ಗಟ್ಟಲೆ ನಷ್ಟ ಉಂಟುಮಾಡುತ್ತಿದ್ದು, ಚೀನೀ ನೆಟಿಜನ್‌ಗಳಲ್ಲಿ ತೀವ್ರ ಆತಂಕ ಮೂಡಿಸಿದೆ.
ವರ್ಷ 2018 ರಿಂದೀಚೆಗೆ ಭಾರತದ ಸೌರಶಕ್ತಿ ಉಪಕರಣ ಹಾಗೂ ಫೋಟೋವೋಲ್ಟಾಯಿಕ್ ಉತ್ಪಾದನಾ ಸಾಮರ್ಥ್ಯವು ಬರೋಬ್ಬರಿ 17 ಪಟ್ಟು ಹೆಚ್ಚಳವಾಗಿದ್ದು, ಭಾರತವು ಸ್ವಾವಲಂಬನೆ ಸಾಧಿಸಿ ಮ್ಯಾನುಫ್ಯಾಕ್ಚರಿಂಗ್ ಹಬ್ ಆಗಿ ಹೊರಹೊಮ್ಮಿದೆ.
ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಅಲ್ಲಿನ ನೆಟಿಜನ್‌ಗಳು ಭಾರತದ ಈ ಕ್ರಾಂತಿಕಾರಿ ಬೆಳವಣಿಗೆಯನ್ನು ಎರಡನೇ ವಿಶ್ವ ಮಹಾಯುದ್ಧದ 'ಸ್ಟಾಲಿನ್‌ಗ್ರಾಡ್' ಯುದ್ಧದ ಸೋಲಿಗೆ ಹೋಲಿಸಿ ಕಳವಳ ವ್ಯಕ್ತಪಡಿಸಿದ್ದಾರೆ.