
ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸಿ. ಜೋಸೆಫ್ ವಿಜಯ್ ಅವರು ಮೊದಲ ಬಾರಿಗೆ ವಿಜಯವಾಡಕ್ಕೆ ಭೇಟಿ ನೀಡಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾಗಿದ್ದಾರೆ.
ಕೃಷ್ಣಾ ನದಿ ನೀರಿನ ಹಂಚಿಕೆ, ಚೆನ್ನೈ ಮಹಾನಗರದ ಕುಡಿಯುವ ನೀರಿನ ಸಮಸ್ಯೆ ಹಾಗೂ ಗೋದಾವರಿ-ಕೃಷ್ಣಾ-ಕಾವೇರಿ ನದಿ ಜೋಡಣೆ ಯೋಜನೆಗಳು ಈ ಸಭೆಯ ಪ್ರಮುಖ ಕಾರ್ಯಸೂಚಿಯಾಗಿವೆ.
ತೆಲುಗು ಗಂಗಾ ಯೋಜನೆಯ ಒಪ್ಪಂದದ ಪ್ರಕಾರ ಚೆನ್ನೈನ ಕುಡಿಯುವ ನೀರಿಗಾಗಿ ಆಂಧ್ರಪ್ರದೇಶದಿಂದ ವಾರ್ಷಿಕ 12 ಟಿಎಂಸಿ ನೀರು ಸರಬರಾಜಾಗಬೇಕಿದೆ.