
ಹುಟ್ಟುತ್ತಲೇ ಎಡಗೈ ಇಲ್ಲದಿದ್ದರೂ ಅದನ್ನು ಸವಾಲಾಗಿ ಸ್ವೀಕರಿಸಿದ ಸಾಯಿ ಭರತ್ ಅಮೆಜಾನ್‌ನಲ್ಲಿ ಪ್ರಮುಖ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ.
2023ರಲ್ಲಿ ಎನ್‌ಐಟಿ ವಾರಂಗಲ್‌ನಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಟೆಕ್ ಮುಗಿಸಿರುವ ಅವರು ಪ್ರಸ್ತುತ ಅಮೆಜಾನ್ ಪೇ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.
ಅವರ ವಾರ್ಷಿಕ ವೇತನ 50 ಲಕ್ಷ ರೂ.ಗಳನ್ನು ಮೀರಿದ್ದು, ಈ ಕುರಿತ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.