
ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡವಾಗಿದ್ದ ಪತಿಯನ್ನು ಭೀಕರವಾಗಿ ಹತ್ಯೆ ಮಾಡಲು ಪತ್ನಿ ಹಾಗೂ ಆಕೆಯ ಪ್ರಿಯಕರನಾದ ಜಿಮ್ ಟ್ರೈನರ್ ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ.
ಬೆಳಗಿನ ಜಾವ ಮಹಿಳೆ ಜಿಮ್‌ಗೆ ಕಾರಿನಲ್ಲಿ ಹೊರಟ ಕೂಡಲೇ ಪ್ರಿಯಕರ ಮನೆಯೊಳಗೆ ನುಗ್ಗಿ ಪತಿಯನ್ನು ಹತ್ಯೆ ಮಾಡಿದ್ದು, ಕಿರುಚಾಟ ಕೇಳಿ ಅಕ್ಕಪಕ್ಕದವರು ಬಂದಾಗ ಆರೋಪಿ ಪರಾರಿಯಾಗಿದ್ದಾನೆ.
ಪತಿಯನ್ನು ಕೊಲೆ ಮಾಡಲು ಜಿಮ್ ಟ್ರೈನರ್ ಜೊತೆ ಸೇರಿ ಸಂಚು ರೂಪಿಸುತ್ತಿದ್ದ ಮತ್ತು ಹತ್ಯೆಗೆ ಮುನ್ನ ನಡೆದ ಪ್ರತಿಯೊಂದು ನಡೆಯೂ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.