
'ವೀರ್ ಗಾರ್ಡಿಯನ್-2026' ಜಂಟಿ ಸಮರಾಭ್ಯಾಸದ ವೇಳೆ ಜಪಾನ್ ಏರ್ ಸೆಲ್ಫ್-ಡಿಫೆನ್ಸ್ ಫೋರ್ಸ್ ಮುಖ್ಯಸ್ಥ ಜನರಲ್ ಟೇಕೆಹಿರೊ ಮೊರಿಟಾ ತೇಜಸ್ ಯುದ್ಧವಿಮಾನದಲ್ಲಿ ಹಾರಾಟ ನಡೆಸಿದ್ದಾರೆ.
ಮೊರಿಟಾ ಅವರ ಈ ನಿರ್ಧಾರವು ಭಾರತೀಯ ಯುದ್ಧವಿಮಾನದ ಮೇಲಿರುವ ಗೌರವ ಮತ್ತು ಆತ್ಮವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದು ಐಎಎಫ್ ಮುಖ್ಯಸ್ಥ ಅಮರ್ ಪ್ರೀತ್ ಸಿಂಗ್ ತಿಳಿಸಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಯುದ್ಧಾಭ್ಯಾಸದಲ್ಲಿ ಭಾರತೀಯ ವಾಯುಪಡೆಯು ತೇಜಸ್, ಸುಖೋಯ್ ಸು-30 ಎಂಕೆಐ ಮತ್ತು ರಫೇಲ್ ವಿಮಾನಗಳೊಂದಿಗೆ ಪಾಲ್ಗೊಂಡಿದೆ.