
ಐಐಟಿ ಬಾಂಬೆಯ ಬಿ.ಟೆಕ್ ವಿದ್ಯಾರ್ಥಿ ಸಾಹಿಲ್ ವಾಕೋಡೆ ಪರೀಕ್ಷೆಯಲ್ಲಿ ಚಾಟ್ಜಿಪಿಟಿ ಬಳಸುತ್ತಿ ಸಿಕ್ಕಿಬಿದ್ದ ಕೆಲವೇ ಗಂಟೆಗಳಲ್ಲಿ ಹಾಸ್ಟೆಲ್ನಲ್ಲಿ ಶವವಾಗಿ ಪತ್ತೆಯಾಗಿದ್ದು, ಮುಂಬೈ ಪೊಲೀಸರು ಪ್ರಕರಣವನ್ನು ಕ್ರೈಂ ಬ್ರಾಂಚ್ಗೆ ಹಸ್ತಾಂತರಿಸಿದ್ದಾರೆ.
ಈ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರೊಫೆಸರ್ ಸೂರ್ಯನಾರಾಯಣ ದುಲ್ಲಾ ಅವರನ್ನು ಬೆಂಬಲಿಸಿ ಐಐಟಿ ಬಾಂಬೆ ಫ್ಯಾಕಲ್ಟಿ ಫೋರಮ್ ನೇತೃತ್ವದಲ್ಲಿ ಕ್ಯಾಂಪಸ್ ಒಳಗೆ ಸುಮಾರು 750 ಬೋಧಕ ಸಿಬ್ಬಂದಿ ಬೃಹತ್ ಮೆರವಣಿಗೆ ನಡೆಸಿದ್ದಾರೆ.
ಪ್ರೊ. ದುಲ್ಲಾ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ಬೋಧಕರ ವೇದಿಕೆ ನಿರಾಕರಿಸಿದ್ದು, ಸ್ವತಂತ್ರ ತನಿಖೆಗಾಗಿ ಅವರನ್ನು ಆಡಳಿತಾತ್ಮಕ ಡೀನ್ ಹುದ್ದೆಯಿಂದ ಮಾತ್ರ ತಾತ್ಕಾಲಿಕವಾಗಿ ಮುಕ್ತಿಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.