
ದೆಹಲಿಯಲ್ಲಿ ಚಲಿಸುವ ರೈಲಿನಲ್ಲಿ ಕಿಟಕಿ ಮೂಲಕ ಪ್ರಯಾಣಿಕರ ಬೆಲೆಬಾಳುವ ವಸ್ತುಗಳನ್ನು ಕದಿಯಲು ಯತ್ನಿಸಿದ ಖದೀಮನೊಬ್ಬನ ಕೈಯನ್ನು ಎಚ್ಚೆತ್ತ ಪ್ರಯಾಣಿಕರು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ.
ರೈಲು ವೇಗವಾಗಿ ಚಲಿಸುತ್ತಿದ್ದರೂ ಪ್ರಯಾಣಿಕರು ಕಳ್ಳನ ಕೈಯನ್ನು ಬಿಡದೆ ಮುಂದಿನ ನಿಲ್ದಾಣ ತಲುಪುವವರೆಗೆ ಹೊರಗೆ ನೇತಾಡಿಸಿದ ಈ ರೋಚಕ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರೈಲು ನಿಲ್ದಾಣ ತಲುಪಿದ ಬಳಿಕ ಪ್ರಯಾಣಿಕರು ಆರೋಪಿಯನ್ನು ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದು, ಈ ವಿಡಿಯೋಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.