
ಅಕ್ಟೋಬರ್ 27ರಿಂದ ಪಂಜಾಬ್ನಲ್ಲಿ ಆರಂಭವಾಗಲಿರುವ ಪುರುಷರ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ತಂಡ ಭಾಗವಹಿಸಲಿದೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಪಾಕಿಸ್ತಾನ ಹಾಕಿ ತಂಡದ ಭಾರತ ಭೇಟಿ ಮತ್ತು ಅನುಮತಿಯನ್ನು ಸೋಮವಾರ ಅಧಿಕೃತವಾಗಿ ಸ್ಪಷ್ಟಪಡಿಸಿದ್ದಾರೆ.
ಈ ಟೂರ್ನಿಯು ಜಲಂಧರ್ ಮತ್ತು ಮೊಹಾಲಿ ನಗರಗಳಲ್ಲಿ ಅಕ್ಟೋಬರ್ 27ರಿಂದ ನವೆಂಬರ್ 5ರವರೆಗೆ ನಡೆಯಲಿದೆ.