Economy
ದೇಶದಲ್ಲಿ ಹಿಂಗಾರು ಬಿತ್ತನೆ ಶೇ 46ರಷ್ಟು ಕುಸಿತ; ಕೇಂದ್ರ ಸರ್ಕಾರದ ದತ್ತಾಂಶ

ದೇಶದಲ್ಲಿ ಹಿಂಗಾರು ಬಿತ್ತನೆ ಶೇ 46ರಷ್ಟು ಕುಸಿತ; ಕೇಂದ್ರ ಸರ್ಕಾರದ ದತ್ತಾಂಶ

prajavani1h
THE BRIEF
1

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ ಅಕ್ಟೋಬರ್ ಅಂತ್ಯದವರೆಗೆ ದೇಶದಲ್ಲಿ ಕೃಷಿ ಬಿತ್ತನೆ ಪ್ರದೇಶ ಶೇ 46ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

2

ಗೋಧಿ, ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳ ಬಿತ್ತನೆಯಲ್ಲಿ ಭಾರಿ ಇಳಿಕೆ ಕಂಡುಬಂದಿದ್ದು, ಗೊಬ್ಬರ ಮತ್ತು ಬೀಜಗಳ ದಾಸ್ತಾನು ಸಮರ್ಪಕವಾಗಿದೆ ಎಂದು ಸಚಿವಾಲಯ ತಿಳಿಸಿದೆ.

3

ಹಿಂಗಾರು ಬಿತ್ತನೆಗೆ ಡಿಸೆಂಬರ್‌ವರೆಗೂ ಅವಕಾಶವಿರುವುದರಿಂದ ಈಗಲೇ ಬಿತ್ತನೆ ಕುಸಿತದ ಬಗ್ಗೆ ಕಳವಳ ಪಡುವ ಅಗತ್ಯವಿಲ್ಲ ಎಂದು ಕೃಷಿ ಸಚಿವಾಲಯದ ಹಿರಿಯ ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ.