
ಶಿವಮೊಗ್ಗದ ಖಾಸಗಿ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಲೆನ್ಸ್ ಲಭ್ಯವಿಲ್ಲದಿದ್ದರೂ ಆಪರೇಷನ್ ಮಾಡಲು ಅನಸ್ತೇಶಿಯಾ ಇಂಜೆಕ್ಷನ್ ನೀಡಿರುವ ಘಟನೆ ನಡೆದಿದೆ.
ಕೊನೆ ಕ್ಷಣದಲ್ಲಿ ಲೆನ್ಸ್ ಇಲ್ಲದಿರುವುದು ತಿಳಿದುಬಂದ ಹಿನ್ನೆಲೆಯಲ್ಲಿ ಆಪರೇಷನ್ ರದ್ದುಗೊಳಿಸಲಾಗಿದ್ದು, ರೋಗಿಗೆ ಆಪರೇಷನ್ ಆಗದೆಯೇ ಕಣ್ಣಿಗೆ ಬ್ಯಾಂಡೇಜ್ ಹಾಕಲಾಗಿದೆ.
ವೈದ್ಯರ ಈ ನಿರ್ಲಕ್ಷ್ಯ ಮತ್ತು ಎಡವಟ್ಟಿನಿಂದಾಗಿ ರೋಗಿಯ ಕುಟುಂಬಸ್ಥರು ಆಸ್ಪತ್ರೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.