
ಫ್ಲೈ ದುಬೈ ವಿಮಾನದಲ್ಲಿ ಸಹ ಪೈಲಟ್ನಿಂದ ನಡೆದ ಹೈಜಾಕ್ ಯತ್ನ ಹಾಗೂ ಚಾಕು ದಾಳಿಯ ನಡುವೆಯೂ ತನ್ನ ಪ್ರಾಣವನ್ನೇ ಪಣಕ್ಕಿಟ್ಟು 180 ಜನರ ಜೀವ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ.
ಪೈಲಟ್ ಸ್ಮಿತ್ ಮಚ್ಚರ್ ಅವರ ಸಾಹಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಕರ್ನಾಟಕದ ರಾಯಚೂರಿನಲ್ಲಿ ನಡೆದ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಅವರ ಫೋಟೋ ರಾರಾಜಿಸಿದೆ.
ನಗರದ ಗಂಜ್ ಸರ್ಕಲ್ನಿಂದ ಚಂದ್ರಮೌಳೇಶ್ವರ್ ಸರ್ಕಲ್ ವರೆಗಿನ ಮೆರವಣಿಗೆಯಲ್ಲಿ ‘ಗಣೇಶನ ಆಶೀರ್ವಾದ ಸ್ಮಿತ್ ಮೇಲಿರಲಿ’ ಎಂದು ಬರೆದ ಭಾವಚಿತ್ರವನ್ನು ಪ್ರದರ್ಶಿಸಲಾಗಿದೆ.