
ಮಹಿಳೆಯರು ಫ್ಯಾಷನ್‌ಗಾಗಿ ಧರಿಸುವ ಹೈ ಹೀಲ್ಸ್ ಪಾದಗಳಷ್ಟೇ ಅಲ್ಲದೆ ಮೊಣಕಾಲು, ಸೊಂಟ ಮತ್ತು ಬೆನ್ನಿನ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.
ಎತ್ತರದ ಚಪ್ಪಲಿಗಳನ್ನು ಧರಿಸಿದಾಗ ದೇಹದ ತೂಕವು ಪಾದದ ಮುಂಭಾಗಕ್ಕೆ ವರ್ಗಾವಣೆಯಾಗಿ ನೆಲದ ಮೇಲಿನ ಸ್ಥಿರತೆ ಕಡಿಮೆಯಾಗುವುದರಿಂದ ಸಮತೋಲನ ತಪ್ಪುವ ಅಪಾಯವಿರುತ್ತದೆ.
ದೀರ್ಘಕಾಲ ಹೈ ಹೀಲ್ಸ್ ಧರಿಸುವುದರಿಂದ ಸ್ನಾಯುಗಳ ಆಯಾಸ, ಬೆನ್ನಿನ ಕೆಳಭಾಗದ ಮೇಲೆ ಒತ್ತಡ ಹಾಗೂ ಪಾದಗಳಲ್ಲಿ ನೋವು ಕಾಣಿಸಿಕೊಳ್ಳಬಹುದು ಎಂದು ಎಚ್ಚರಿಸಲಾಗಿದೆ.