
ಭಾರತದಲ್ಲಿ ನಡೆಯುವ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಚಾಟ್-ಜಿಪಿಟಿ, ಕ್ಯಾಂಪಾ ಮತ್ತು ಎಸ್‌ಬಿಐ ಲೈಫ್ ಕಂಪನಿಗಳು ಅಧಿಕೃತ ಪಾಲುದಾರರಾಗಿವೆ ಎಂದು ಬಿಸಿಸಿಐ ತಿಳಿಸಿದೆ.
ಈ ಪಾಲುದಾರಿಕೆಯ ಒಟ್ಟು ಮೌಲ್ಯ 130 ಕೋಟಿ ರೂಪಾಯಿಗಳಾಗಿದ್ದು, ಇದು ಕಳೆದ ಬಾರಿಗಿಂತ ಶೇ. 44ರಷ್ಟು ಹೆಚ್ಚಳವಾಗಿದೆ.
ಈ ಒಪ್ಪಂದವು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ಆರಂಭವಾಗಿ 2028ರ ಮಾರ್ಚ್‌ವರೆಗೆ ನಡೆಯುವ ಒಟ್ಟು 35 ತವರಿನ ಪಂದ್ಯಗಳಿಗೆ ಅನ್ವಯವಾಗಲಿದೆ.