
ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರು ಸಹ-ಸ್ಥಾಪಕರಾಗಿ ಹೂಡಿಕೆ ಮಾಡಿರುವ 'ಸೀಕ್ರೆಟ್ ಅಲ್ಕೆಮಿಸ್ಟ್' ಸುಗಂಧ ದ್ರವ್ಯ ಬ್ರ್ಯಾಂಡ್ ಆದಾಯವು 120 ಕೋಟಿ ರೂಪಾಯಿ ಗಡಿಯನ್ನು ಮೀರಿದೆ.
ಅರೊಮಾಥೆರಪಿ ಆಧಾರಿತ ಈ ಕಂಪನಿಯು ಕಳೆದ ಎಂಟು ತಿಂಗಳುಗಳಲ್ಲಿ 8 ಪಟ್ಟು ಬೆಳವಣಿಗೆಯನ್ನು ದಾಖಲಿಸಿದೆ ಎಂದು ಕಂಪೆನಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅಂಕಿತ್ ಠಾಡಾನಿ ಮತ್ತು ಆಕಾಶ್ ವಾಲಿಯಾ ಅವರಿಂದ ಸ್ಥಾಪಿತವಾದ ಈ ಬ್ರ್ಯಾಂಡ್‌ಗೆ 2024ರಲ್ಲಿ ಸಮಂತಾ ಸಹ-ಸ್ಥಾಪಕರಾಗಿ ಸೇರಿಕೊಂಡಿದ್ದು, ಇದು ಡಿ2ಸಿ ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ವಿಸ್ತರಣೆಗೊಂಡಿದೆ.