
ಸ್ಟಾರ್‌ಲಿಂಕ್ ಸೇವೆಗೆ ಭಾರತೀಯ ಉದ್ಯಮಿಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ಎಲೋನ್ ಮಸ್ಕ್ ಆರೋಪಿಸಿದ ಹಿನ್ನೆಲೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಗುರುವಾರ ಅಕ್ಟೋಬರ್ 8ರಂದು ಶೇ. 2.6ರಷ್ಟು ಕುಸಿದವು.
ಷೇರುಪೇಟೆ ವಹಿವಾಟು ಮುಕ್ತಾಯದ ವೇಳೆಗೆ ನಿಫ್ಟಿ 50 ಸೂಚ್ಯಂಕವು ಶೇ. 1.7ರಷ್ಟು ಅಂದರೆ ಸುಮಾರು 384 ಅಂಕಗಳಷ್ಟು ಇಳಿಕೆಯಾಗಿ 22,603 ಅಂಕಗಳಿಗೆ ತಲುಪಿದೆ.
ದೇಶದ ಸಂವಹನ ಸಚಿವಾಲಯವು ಮಸ್ಕ್ ಅವರ ಆರೋಪವನ್ನು ಆಧಾರರಹಿತ ಮತ್ತು ತಪ್ಪು ತಿಳುವಳಿಕೆಯಿಂದ ಕೂಡಿದೆ ಎಂದು ನಿರಾಕರಿಸಿದೆ.