
ದೇಶದಲ್ಲಿ 10 ಮತ್ತು 20 ರೂಪಾಯಿ ಮುಖಬೆಲೆಯ 100 ಕೋಟಿ ಪಾಲಿಮರ್ ನೋಟುಗಳ ಫೀಲ್ಡ್ ಟ್ರಯಲ್ ನಡೆಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಕಡಿಮೆ ಮುಖಬೆಲೆಯ ನೋಟುಗಳ ಬಾಳಿಕೆ ಮತ್ತು ಜೀವಿತಾವಧಿಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಹೊಸ ನೋಟುಗಳು ಬಂದರೂ ಹಳೆಯ ಕಾಗದದ ನೋಟುಗಳು ಚಲಾವಣೆಯಲ್ಲಿರುತ್ತವೆ.
ಈ ಪಾಲಿಮರ್ ನೋಟುಗಳು ಕಾಗದದ ನೋಟುಗಳಿಗಿಂತ 2 ರಿಂದ 4 ಪಟ್ಟು ಹೆಚ್ಚು ಬಾಳಿಕೆ ಬರುವ ಸಾಧ್ಯತೆಯಿದ್ದು, ಇವುಗಳ ಕಾರ್ಯಕ್ಷಮತೆಯನ್ನು ಪರೀಕ್ಷಿಸಿದ ನಂತರವೇ ದೊಡ್ಡ ಪ್ರಮಾಣದಲ್ಲಿ ಮುದ್ರಿಸಲಾಗುವುದು.