
ಆಗಸ್ಟ್ 15ರಿಂದ ಶ್ರೀಲಂಕಾದ ಗಾಲೆಯಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಟೀಮ್ ಇಂಡಿಯಾ ತನ್ನ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಅನ್ನು ಸಿದ್ಧಪಡಿಸಿದೆ.
ಸಾಯಿ ಸುದರ್ಶನ್ ಅಲಭ್ಯತೆಯಿಂದಾಗಿ ದೇವದತ್ ಪಡಿಕ್ಕಲ್ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದ್ದು, ಕೆ.ಎಲ್. ರಾಹುಲ್ ಮತ್ತು ಪ್ರಸಿದ್ಧ್ ಕೃಷ್ಣ ಸೇರಿದಂತೆ ಮೂವರು ಕನ್ನಡಿಗರು ತಂಡದಲ್ಲಿರಲಿದ್ದಾರೆ.
ಶುಭ್ಮನ್ ಗಿಲ್ ನಾಯಕತ್ವದ ತಂಡವು 6 ಬ್ಯಾಟರ್ಗಳು, ಇಬ್ಬರು ಆಲ್ರೌಂಡರ್ಗಳು ಮತ್ತು ಮೂವರು ಬೌಲರ್ಗಳ ಸಂಯೋಜನೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.