
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ ವಾರಾಂತ್ಯದ ಪಂಚಾಯಿತಿಯಲ್ಲಿ ಸ್ಪರ್ಧಿ ಗಾನವಿ ಅವರ ನಡೆ ಹಾಗೂ ಟಾಸ್ಕ್ ಆಟದ ಬಗ್ಗೆ ನಿರೂಪಕ ಕಿಚ್ಚ ಸುದೀಪ್ ಅಸಮಾಧಾನ ವ್ಯಕ್ತಪಡಿಸಿದರು.
ಟಾಸ್ಕ್‌ನಲ್ಲಿ ತಪ್ಪು ಮಾಡಿ ಅದನ್ನು ಒಪ್ಪಿಕೊಳ್ಳದೆ ವಾದಕ್ಕಿಳಿದ ಗಾನವಿ ಧೋರಣೆಯನ್ನು ಸುದೀಪ್ ತೀವ್ರವಾಗಿ ಖಂಡಿಸಿದರು.
ನಡೆದ ಘಟನೆಯ ಕುರಿತು ವಾದ ಮುಂದುವರಿಸಲು ಯತ್ನಿಸಿದಾಗ, ಮನೆಯಿಂದ ಹೊರಹೋಗುವುದಾದರೆ ತಕ್ಷಣವೇ ಬಾಗಿಲು ತೆರೆಸುವುದಾಗಿ ಸುದೀಪ್ ಖಡಕ್ ಎಚ್ಚರಿಕೆ ನೀಡಿದರು.