
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಯುಜಿ ನೀಟ್ 2026ರ ಎರಡನೇ ಸುತ್ತಿನ ಸೀಟು ಹಂಚಿಕೆಯ ನಂತರ ಸೀಟು ರದ್ದುಪಡಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಕೆಲವು ಷರತ್ತುಗಳ ಆಧಾರದ ಮೇಲೆ ಅವಕಾಶ ಕಲ್ಪಿಸಿದೆ.
ಎಂಸಿಸಿ ಅಥವಾ ಇತರ ರಾಜ್ಯಗಳಲ್ಲಿ ಸೀಟು ಹಂಚಿಕೆಯಾದವರು ಸೆಪ್ಟೆಂಬರ್ 20ರ ಸಂಜೆ 5 ಗಂಟೆಯೊಳಗೆ ಯಾವುದೇ ದಂಡವಿಲ್ಲದೆ ಕೆಇಎ ಕೌನ್ಸೆಲಿಂಗ್‌ನಿಂದ ಹೊರಡಲು ಅವಕಾಶ ನೀಡಲಾಗಿದೆ.
ಆದರೆ ಎಂಸಿಸಿಯಲ್ಲಿ ಸೀಟು ಸಿಗದವರು ಕೆಇಎ ಸೀಟು ರದ್ದುಪಡಿಸಿಕೊಳ್ಳಲು 10,000 ರೂಪಾಯಿ ದಂಡ ಕಟ್ಟಿ, ಖುದ್ದು ಕಚೇರಿಗೆ ಭೇಟಿ ನೀಡಿ ರದ್ದುಗೊಳಿಸಿಕೊಳ್ಳಬೇಕಾಗುತ್ತದೆ.