
ಬ್ರಿಟನ್ನ ಮಾಜಿ ಪ್ರಧಾನಿ ರಿಷಿ ಸುನಕ್ ಅವರು ದೆಹಲಿ ಪ್ರವಾಸದ ವೇಳೆ ತಮ್ಮ ಅತ್ತೆ ಹಾಗೂ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರೊಂದಿಗೆ ಬಂಗಾಳಿ ಸ್ವೀಟ್ ಹೌಸ್ಗೆ ಭೇಟಿ ನೀಡಿದ್ದಾರೆ.
ಅಲ್ಲಿ ಅವರು ಚಾಟ್, ಲಸ್ಸಿ, ಚಹಾ ಹಾಗೂ ತಮ್ಮ ನೆಚ್ಚಿನ ಭಾರತೀಯ ಸಿಹಿತಿಂಡಿಯಾದ ರಸಮಲೈಯನ್ನು ಸವಿದರು.
1937ರಲ್ಲಿ ಆರಂಭವಾದ ಈ ಬಂಗಾಳಿ ಸ್ವೀಟ್ ಹೌಸ್ ದೆಹಲಿಯ ಆಹಾರ ಸಂಸ್ಕೃತಿಯ ಪ್ರಮುಖ ಗುರುತಾಗಿ ಜನಪ್ರಿಯತೆ ಗಳಿಸಿದೆ.