
ಜೀ ಕನ್ನಡದ ‘ಹಳ್ಳಿ ಪವರ್ ರೀಲೋಡೆಡ್’ ರಿಯಾಲಿಟಿ ಶೋನಲ್ಲಿ ನಗರದ ಸ್ಪರ್ಧಿಗಳು ಇಷ್ಟು ದಿನ ತಂಗಿದ್ದ ಗ್ರಾಮಸ್ಥರ ಮನೆಗಳಿಂದ ಅಧಿಕೃತವಾಗಿ 'ವಾಡೆ ಮನೆ'ಗೆ ಶಿಫ್ಟ್ ಆಗಿದ್ದಾರೆ.
ಗ್ರಾಮಸ್ಥರು ಸ್ಪರ್ಧಿಗಳಿಗೆ ಪ್ರೀತಿಯಿಂದ ಬೀಳ್ಕೊಡುಗೆ ನೀಡಿದ್ದು, ಈ ಭಾವುಕ ಕ್ಷಣಗಳು ಪ್ರೇಕ್ಷಕರ ಗಮನ ಸೆಳೆದಿವೆ.
ಸಂಪ್ರದಾಯಬದ್ಧವಾಗಿ ಗೃಹಪ್ರವೇಶ ಮಾಡಿರುವ ಸ್ಪರ್ಧಿಗಳು ಈಗ ಒಂದೇ ಸೂರಿನಡಿ ವಾಡೆ ಮನೆಯಲ್ಲಿ ಇರಲಿದ್ದು, ಮುಂಬರುವ ದಿನಗಳಲ್ಲಿ ಸ್ಪರ್ಧೆ ಮತ್ತು ಪೈಪೋಟಿ ಮತ್ತಷ್ಟು ತೀವ್ರಗೊಳ್ಳಲಿದೆ.