
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ ಮೂಡಿಬಂದಿರುವ 'ಅಮೆರಿಕ ಅಮೆರಿಕ 2' ಸಿನಿಮಾವನ್ನು ವೀಕ್ಷಿಸಿ ಸುಧಾ ಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಚಿತ್ರದಲ್ಲಿ ಪೃಥ್ವಿ ಅಂಬಾರ್, ನಿರೂಪ್ ಭಂಡಾರಿ ಹಾಗೂ ಶಾನ್ವಿ ಶ್ರೀವಾಸ್ತವ ಅವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಸಿಯಾಟಲ್ ನಗರದ ಸುಂದರ ದೃಶ್ಯಗಳು ಮತ್ತು ಇಂದಿನ ಕಾಲದ ವೈವಾಹಿಕ ಸಂಬಂಧದ ಕಥೆ ಕುಟುಂಬ ಸಮೇತ ನೋಡುವಂತಿದೆ ಎಂದು ಸುಧಾ ಮೂರ್ತಿ ತಿಳಿಸಿದ್ದಾರೆ.