Health & Environment
ಗದಗದ ‘ನಮ್ಮ ಕ್ಲಿನಿಕ್’ನಲ್ಲಿ ಬಡ ರೋಗಿಗಳಿಗೆ ಅವಧಿ ಮೀರಿದ ಮಾತ್ರೆಗಳ ವಿತರಣೆ

ಗದಗದ ‘ನಮ್ಮ ಕ್ಲಿನಿಕ್’ನಲ್ಲಿ ಬಡ ರೋಗಿಗಳಿಗೆ ಅವಧಿ ಮೀರಿದ ಮಾತ್ರೆಗಳ ವಿತರಣೆ

tv9kannada59m
THE BRIEF
1

ಗದಗ ನಗರದ ಬೆಟಗೇರಿ ನಮ್ಮ ಕ್ಲಿನಿಕ್‌ನಲ್ಲಿ ವೈದ್ಯರು ಮತ್ತು ಸಿಬ್ಬಂದಿ ಚಿಕಿತ್ಸೆಗೆ ಬಂದ ಬಡ ಮಹಿಳೆಯೊಬ್ಬರಿಗೆ ಅವಧಿ ಮುಗಿದ ಮಾತ್ರೆಗಳನ್ನು ವಿತರಿಸಿರುವ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

2

ಸುಮಾರು 15 ದಿನಗಳ ಹಿಂದೆ ಕೆಮ್ಮಿನ ಸಮಸ್ಯೆಯಿಂದ ಬಂದ ಮತ್ತೊಬ್ಬ ಮಹಿಳೆಗೂ ಇದೇ ರೀತಿ ಅವಧಿ ಮೀರಿದ ಔಷಧಿಗಳನ್ನು ನೀಡಿರುವುದು ಬೆಳಕಿಗೆ ಬಂದಿದ್ದು, ಸ್ಥಳೀಯರು ಕ್ಲಿನಿಕ್‌ನಲ್ಲಿ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ.

3

ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಈ ಗಂಭೀರ ಪ್ರಮಾದದ ಕುರಿತು ಮಾಧ್ಯಮದ ಎದುರು ವೈದ್ಯೆ ಡಾ. ರಾಣಿ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.