
ಭಾರತದ ಜಿಡಿಪಿ ಲೆಕ್ಕಾಚಾರದ ಪರಿಷ್ಕೃತ ವಿಧಾನಕ್ಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಅಧಿಕೃತ ಬೆಂಬಲ ವ್ಯಕ್ತಪಡಿಸಿದ್ದು, ಇವು ಜಾಗತಿಕ ಉತ್ತಮ ಅಭ್ಯಾಸಗಳಿಗೆ ಹೊಂದಿಕೆಯಾಗುತ್ತವೆ ಎಂದಿದೆ.
ಕರೆನ್ಸಿ ಮೌಲ್ಯ ಕುಸಿತವು ಆರ್ಥಿಕ ನೀತಿಗಳ ವೈಫಲ್ಯವಲ್ಲದೆ, ಇಂಧನ ಪೂರೈಕೆಯ ಆಘಾತದ ಪರಿಸ್ಥಿತಿಯನ್ನು ಭಾರತ ಉತ್ತಮವಾಗಿ ನಿಭಾಯಿಸಿದೆ ಎಂದು ಐಎಂಎಫ್ ಏಷ್ಯಾ ಪೆಸಿಫಿಕ್ ನಿರ್ದೇಶಕ ಕೃಷ್ಣ ಶ್ರೀನಿವಾಸನ್ ತಿಳಿಸಿದ್ದಾರೆ.
ತನ್ನ ಇತ್ತೀಚಿನ ವರದಿಯಲ್ಲಿ ಭಾರತದ ಆರ್ಥಿಕ ಪ್ರಗತಿ ಶೇ. 7ರಷ್ಟು ಆಗಬಹುದು ಎಂದು ಅಂದಾಜಿಸಿರುವ ಐಎಂಎಫ್, ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಭಾರತವೇ ಅತಿವೇಗದ ಬೆಳವಣಿಗೆ ಸಾಧಿಸಲಿದೆ ಎಂದಿದೆ.