
ಕಿತ್ತೂರು ಸಂಸ್ಥಾನದ ರಾಜಗುರುಗಳ ವಂಶಸ್ಥರಾದ ಧಾರವಾಡದ ಕಟ್ಟಿಮಠ ಕುಟುಂಬವು ತಮ್ಮ ಪೂರ್ವಜರ ಪರಂಪರೆಯಂತೆ ನವರಾತ್ರಿ ಉತ್ಸವವನ್ನು ಆಚರಿಸುತ್ತಿದೆ.
ಮುಂಬೈನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಕಾರ್ತಿಕ್ ಕಟ್ಟಿಮಠ ಅವರು ರಜೆ ಹಾಕಿ ಬಂದು ಈ ಬಾರಿ 'ಕಾಶಿಕಾ ನವರಾತ್ರಿ ಉತ್ಸವ' ಪರಿಕಲ್ಪನೆ ಮೂಡಿಸಿದ್ದಾರೆ.
ಮಂಗಳವಾರ ಪೇಟೆಯಲ್ಲಿರುವ 150-200 ವರ್ಷಗಳ ಹಳೆಯ ಮನೆಯಲ್ಲಿ ಕಾಶಿಯ ವಿವಿಧ ದೇವಸ್ಥಾನಗಳ ಪ್ರತಿಕೃತಿಗಳನ್ನು ನಿರ್ಮಿಸಿ ಪೂಜೆ ಸಲ್ಲಿಸಲಾಗುತ್ತಿದೆ.