
ನಾರ್ತ್ ಕ್ಯಾರೊಲಿನಾದ ಶಾಲಾ ವಿದ್ಯಾರ್ಥಿ ಪ್ರಖರ್ ಪುರೋಹಿತ್ ಕಲುಷಿತ ನೀರನ್ನು ಬಳಸಿ ವಿದ್ಯುತ್ ಉತ್ಪಾದಿಸುವ ವಿಶಿಷ್ಟ ಪ್ರಯೋಗವನ್ನು ಮಾಡಿ ಗಮನ ಸೆಳೆದಿದ್ದಾರೆ.
ಈ ಸಾಧನೆಗಾಗಿ ಪ್ರಖರ್ ಅವರು 2026 ರ ಪ್ರತಿಷ್ಠಿತ 3M ಯಂಗ್ ಸೈಂಟಿಸ್ಟ್ ಚಾಲೆಂಜ್ ಸ್ಪರ್ಧೆಯಲ್ಲಿ ನಾರ್ತ್ ಕ್ಯಾರೊಲಿನಾ ಸ್ಟೇಟ್ ಮೆರಿಟ್ ವಿನ್ನರ್ ಗೌರವಕ್ಕೆ ಭಾಜನರಾಗಿದ್ದಾರೆ.
ಕಲುಷಿತ ನೀರನ್ನು ಸಣ್ಣ ವಿದ್ಯುನ್ಮಾನ ಸಾಧನಗಳಿಗೆ ಇಂಧನವಾಗಿ ಬಳಸುವ ಅವರ ಪರಿಕಲ್ಪನೆಯು ಜಾಗತಿಕ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.