
ಒಡಿಶಾದ ಬೆರ್ಹಾಂಪುರ ಆಸ್ಪತ್ರೆಯಲ್ಲಿ ಎರಡು ಪ್ರತ್ಯೇಕ ತಲೆಗಳು, ಎರಡು ಬೆನ್ನುಹುರಿ ಹಾಗೂ ಒಂದೇ ಹೃದಯ ಹೊಂದಿರುವ ಅಪರೂಪದ ಡೈಸೆಫಾಲಿಕ್ ಪ್ಯಾರಾಪಾಗಸ್ ಸಯಾಮಿ ಅವಳಿ ಮಗು ಜನಿಸಿದೆ.
ಹುಟ್ಟುವಾಗ 2.6 ಕೆಜಿ ತೂಕವಿದ್ದ ಈ ನವಜಾತ ಶಿಶುವನ್ನು ಎಸ್ಎನ್ಸಿಯು ಘಟಕದಲ್ಲಿ ತೀವ್ರ ನಿಗಾದಲ್ಲಿ ಇರಿಸಲಾಗಿದ್ದು, ವೈದ್ಯರ ತಂಡ ಪರೀಕ್ಷೆ ನಡೆಸುತ್ತಿದೆ.
ಕಂಧಮಾಲ್ ಜಿಲ್ಲೆಯ ಬಡ ಬುಡಕಟ್ಟು ದಂಪತಿಯ ಮೊದಲ ಮಗುವಾಗಿರುವ ಇದರ ಹೆಚ್ಚಿನ ಚಿಕಿತ್ಸೆಗೆ ಭುವನೇಶ್ವರದ ಏಮ್ಸ್ ಆಸ್ಪತ್ರೆಗೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ.