ನೈಸ್ ರಸ್ತೆ ಭೂಸ್ವಾಧೀನದಲ್ಲಿನ ಅಕ್ರಮಗಳ ಕುರಿತು ಸ್ವತಂತ್ರ ತನಿಖೆ ಮತ್ತು ಫೋರೆನ್ಸಿಕ್ ಆಡಿಟ್ ನಡೆಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಬುಧವಾರ ಆದೇಶಿಸಿದೆ.
111 ಕಿ.ಮೀ. ಎಕ್ಸ್ಪ್ರೆಸ್ ವೇ ಯೋಜನೆಯಲ್ಲಿ ಕಳೆದ 25-26 ವರ್ಷಗಳಲ್ಲಿ ಕೇವಲ 5 ಕಿ.ಮೀ. ಮಾತ್ರ ನಿರ್ಮಾಣವಾಗಿದ್ದು, ನೈಸ್ ಸಂಸ್ಥೆ 20 ಸಾವಿರ ಎಕರೆಗೂ ಹೆಚ್ಚು ಭೂಮಿ ಹೊಂದಿದೆ.
ನ್ಯಾಯಮೂರ್ತಿ ಡಿ.ಕೆ.ಸಿಂಗ್ ಮತ್ತು ಟಿ.ಎಂ.ನದಾಫ್ ಅವರಿದ್ದ ವಿಭಾಗೀಯ ಪೀಠವು, ರೈತರಿಗೆ ಪರಿಹಾರ ನೀಡದೆ ಭೂಮಿ ವಶಪಡಿಸಿಕೊಂಡಿರುವ ನೈಸ್ ಸಂಸ್ಥೆಯ ಮೇಲ್ಮನವಿಯನ್ನು ವಜಾಗೊಳಿಸಿದೆ.