
2027ರ ಮಾರ್ಚ್ 18ರಿಂದ ಮೇ 2ರವರೆಗೆ ಪಾಕಿಸ್ತಾನ್ ಸೂಪರ್ ಲೀಗ್ನ 12ನೇ ಆವೃತ್ತಿಯನ್ನು ನಡೆಸುವುದಾಗಿ ಪಿಸಿಬಿ ಅಧಿಕೃತವಾಗಿ ಘೋಷಿಸಿದೆ.
ಮಾರ್ಚ್ 10ರಿಂದ ಮೇ 15ರವರೆಗೆ ನಡೆಯಲಿರುವ ಐಪಿಎಲ್ ವೇಳಾಪಟ್ಟಿಯೊಂದಿಗೆ ಪಿಎಸ್ಎಲ್ ಪಂದ್ಯಗಳು ಮುಖಾಮುಖಿಯಾಗಲಿದ್ದು, ಶೇ. 80ರಷ್ಟು ಪಂದ್ಯಗಳು ಏಕಕಾಲದಲ್ಲಿ ನಡೆಯಲಿವೆ.
ಮುಂದಿನ ಆವೃತ್ತಿಯಿಂದ ಪಿಎಸ್ಎಲ್ ಅನ್ನು 8 ತಂಡಗಳಿಗೆ ವಿಸ್ತರಿಸಲಾಗುತ್ತಿದ್ದು, ಇದು ಕ್ರಿಕೆಟ್ ರಾಜತಾಂತ್ರಿಕತೆಯ ಜಿದ್ದಾಜಿದ್ದಿಗೆ ಕಾರಣವಾಗಿದೆ.