
ಕೆ.ಆರ್. ಮಾರ್ಕೆಟ್ನಲ್ಲಿ 50ಕ್ಕೂ ಹೆಚ್ಚು ಮೊಬೈಲ್ ಕಳ್ಳತನ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ, ಅಲ್ಲಿ ಅತ್ಯಾಧುನಿಕ ಫೇಸ್ ರೆಕಗ್ನಿಷನ್ ಎಐ ಕ್ಯಾಮೆರಾಗಳನ್ನು ಅಳವಡಿಸಲು ಪೊಲೀಸರು ನಿರ್ಧರಿಸಿದ್ದಾರೆ.
ಈ ಕ್ಯಾಮೆರಾಗಳು ಅಪರಾಧಿಗಳ ಡೇಟಾಬೇಸ್ನೊಂದಿಗೆ ಮುಖವನ್ನು ಹೋಲಿಕೆ ಮಾಡಿ, ಹೊಂದಾಣಿಕೆಯಾದ ತಕ್ಷಣ ಪೊಲೀಸರ ಮೊಬೈಲ್ಗೆ ಅಲರ್ಟ್ ಸಂದೇಶ ಕಳುಹಿಸುವ ತಂತ್ರಜ್ಞಾನವನ್ನು ಹೊಂದಿವೆ.
ಗೌರಿ-ಗಣೇಶ, ದಸರಾ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಈ ಮುನ್ನೆಚ್ಚರಿಕಾ ಕ್ರಮಕ್ಕೆ ಸೂಚನೆ ನೀಡಿದ್ದಾರೆ.