
ಚಾಮರಾಜನಗರ ತಾಲೂಕಿನ ಕುಮಚಹಳ್ಳಿಯಲ್ಲಿ ಜಮೀನಿನಲ್ಲಿ ಮೇಯುತ್ತಿದ್ದ ರೈತ ತಮ್ಮಯ್ಯ ಎಂಬುವವರಿಗೆ ಸೇರಿದ ಗರ್ಭಿಣಿ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಅರ್ಧ ತಿಂದು ಹಾಕಿದೆ.
ಕಳೆದ ವಾರ ಬಡಗಲಪುರದಲ್ಲಿ ರೈತನೊಬ್ಬನನ್ನು ಹುಲಿ ಬಲಿ ಪಡೆದ ಘಟನೆಯ ಬೆನ್ನಲ್ಲೇ ಈ ಹೊಸ ದಾಳಿ ಸಂಭವಿಸಿದೆ.
ಹುಲಿಯ ನಿರಂತರ ಅಟ್ಟಹಾಸದಿಂದ ಕುಮಚಹಳ್ಳಿ ಗ್ರಾಮಸ್ಥರು ತೀವ್ರ ಆತಂಕಗೊಂಡು ಭಯಭೀತರಾಗಿದ್ದಾರೆ.